A+     A     A-
RTI Online :: Home | Submit RTI Request | Submit RTI First Appeal | View RTI Status | RTI FAQ
ಸೂಚನೆ: ಆತ್ಮೀಯ ನಾಗರಿಕರೇ, ಆರ್.ಟಿ.ಐ. ಆನ್‌ಲೈನ್‌ ಪೋರ್ಟಲ್‌ನ ತಾಂತ್ರಿಕ ನಿರ್ವಹಣೆಗಾಗಿ ದಿನಾಂಕ: 19-04-2024, 10:00 AM ರಿಂದ ದಿನಾಂಕ: 21-04-2024 11:59 PM ರವರೆಗೆ ಕಾರ್ಯನಿರ್ವಹಿಸಲು ಲಭ್ಯವಿರುವುದಿಲ್ಲ.
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಅಧಿಕಾರಿಗಳ ವಿವರ ವಿನಂತಿಯನ್ನು ಸಲ್ಲಿಸಿ

ಆನ್ ಲೈನ್‍ನಲ್ಲಿ ಮಾಹಿತಿ ಹಕ್ಕು ಅಧಿನಿಯಮದ ಮಾಹಿತಿ ವ್ಯವಸ್ಥೆ

 

ಕೇಂದ್ರ ಸರ್ಕಾರ ಅಥವಾ ಇತರ ರಾಜ್ಯ ಸರ್ಕಾರಗಳ ಅಡಿಯಲ್ಲಿ ಇಲಾಖೆಗಳು/ಸಾರ್ವಜನಿಕಪ್ರಾಧಿಕಾರಿಗಳಿಗಾಗಿ ಈ ಪೋರ್ಟಲ್ ಮೂಲಕ ಮಾಹಿತಿ ಹಕ್ಕು ಅರ್ಜಿ/ಪ್ರಥಮ ಮೇಲ್ಮನವಿ ಸಲ್ಲಿಸಬೇಡಿ, ಸಲ್ಲಿಸಿದಲ್ಲಿ ಶುಲ್ಕ ಮೊತ್ತದ ಮರುಪಾವತಿ ಇಲ್ಲದೇ ಅರ್ಜಿಯನ್ನು ಹಿಂದಿರುಗಿಸಲಾಗುತ್ತದೆ.

ಇದು ಮಾಹಿತಿ ಹಕ್ಕು ಅಧಿನಿಯಮದ ಅರ್ಜಿ/ಪ್ರಥಮ ಮೇಲ್ಮನವಿ ಆನ್‍ಲೈನ್ ಅರ್ಜಿಯ ಜೊತೆಗೆ ಸಂದಾಯದ ಹೆಬ್ಬಾಗಿಲಿನ ಪೋರ್ಟಲ್ ಸಹ ಆಗಿರುತ್ತದೆ. ಇಂಟರ್ನೆಟ್ ಬ್ಯಾಂಕಿನ ಮೂಲಕ ಶುಲ್ಕ ಪಾವತಿ ಮಾಡಬಹುದು. ಈ ಪೋರ್ಟಲ್ ಮೂಲಕ ಮಾಹಿತಿ ಹಕ್ಕು ಅರ್ಜಿ/ಪ್ರಥಮ ಮೇಲ್ಮನವಿಯನ್ನು ಭಾರತೀಯ ನಾಗರೀಕರು, ಇಲಾಖೆಗಳು/ಸಾರ್ವಜನಿಕ ಅಧಿಕಾರಿಗಳಿಗೆ ಮಾತ್ರ ಸಲ್ಲಿಸಬಹುದು. ಕರ್ನಾಟಕ ಸರ್ಕಾರ
ದಯವಿಟ್ಟು ಮಾಹಿತಿ ಕೋರಿಕೆ ಅರ್ಜಿ/ಪ್ರಥಮ ಮೇಲ್ಮನವಿ ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಸೂಚನೆಗಳನ್ನು ಓದಿ.

rti logo


ಹಕ್ಕುತ್ಯಾಗ

  1. ಇ-ಆಡಳಿತ ಕೇಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)ವು ಆರ್.ಟಿ.ಐ ಆನ್‌ಲೈನ್‌ ತಂತ್ರಾಂಶದ ಅನುಷ್ಠಾನವನ್ನು ನಿರ್ವಹಿಸುತ್ತಿರುವ ನೋಡಲ್‌ ಏಜನ್ಸಿಯಾಗಿದೆ. ಆರ್‌ ಟಿ ಐ ಆನ್‌ಲೈನ್‌ ನಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳೆ ಜವಾಬ್ದಾರರಾಗಿರುತ್ತಾರೆ.
  2. ಆರ್.ಟಿ.ಐ ಆನ್‌ಲೈನ್‌ ಅರ್ಜಿಗಳಿಗೆ ಸಂಬಂಧಿಸಿದ ದೂರುಗಳನ್ನು, ಹಾಗೂ ನಿಗಧಿತ ಸಮಯದೊಂದಿಗೆ ವಿಲೇವಾರಿಯಾಗದೆ ವಿಳಂಬವಾಗಿರುವ ಅರ್ಜಿಗಳ ದೂರುಗಳನ್ನು ಆಯಾ ಇಲಾಖಾ ನೋಡಲ್‌ ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಇಲಾಖಾವಾರು ನೋಡಲ್‌ ಅಧಿಕಾರಿಗಳ ಪಟ್ಟಿಯನ್ನು ಆರ್.ಟಿ.ಐ ಆನ್‌ ಲೈನ್‌ ಪೋರ್ಟಲ್‌ನಲ್ಲಿ ನಮೂದಿಸಲಾಗಿದೆ. ಆರ್.ಟಿ.ಐ. ಆನ್‌ ಲೈನ್‌ ತಂತ್ರಾಂಶದ ತಾಂತ್ರಿಕ ತೊಂದರೆಗಳಿದ್ದಲ್ಲಿ ಮಾತ್ರ ಇ-ಆಡಳಿತ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.
  3. ಆರ್.ಟಿ.ಐ ಆನ್‌ ಲೈನ್‌ ತಂತ್ರಾಂಶದಲ್ಲಿ ಅನುಷ್ಠಾನವಾಗದ ಸಾರ್ವಜನಿಕ ಪ್ರಾಧಿಕಾರಕ್ಕೆ ಸೆಕ್ಷನ್‌ 6(3)ರ ಅಡಿಯಲ್ಲಿ ಅರ್ಜಿಗಳನ್ನು ಆರ್.ಟಿ.ಐ. ಆನ್‌ಲೈನ್‌ನಲ್ಲಿ ವರ್ಗಾಯಿಸುವ ಸೌಲಭ್ಯವಿರುವುದಿಲ್ಲ.
  4. ಆರ್.ಟಿ.ಐ ಆನ್‌ ಲೈನ್‌ ತಂತ್ರಾಂಶದಲ್ಲಿ ಅರ್ಜಿ/ಮನವಿಗಳು ಮತ್ತು ಪ್ರಥಮ ಮೇಲ್ಮನವಿಗಳನ್ನು ಸಲ್ಲಿಸಲು ಆರ್.ಟಿ.ಐ. ಆನ್‌ಲೈನ್‌ ಪೋರ್ಟಲ್‌ ನಲ್ಲಿ ಲಭ್ಯವಿರುವ ಇಲಾಖಾ ಪಟ್ಟಿಯಲ್ಲಿರುವ ಇಲಾಖೆಗಳಿಗೆ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಆರ್.ಟಿ.ಐ. ಆನ್‌ಲೈನ್‌ ತಂತ್ರಾಂಶದಲ್ಲಿ ಅನುಷ್ಠಾನವಾಗದ ಸಾರ್ವಜನಿಕ ಪ್ರಾಧಿಕಾರಕ್ಕೆ ಅರ್ಜಿದಾರರು ಹಸ್ತಚಾಲಿತವಾಗಿ ಸಲ್ಲಿಸತಕ್ಕದ್ದು.
  5. ಆಧಾರ್‌ ಕಾರ್ಡ/ಪ್ಯಾನ್‌ ಕಾರ್ಡ/ಪಾಸ್‌ ಪೋರ್ಟ/ವೈಯಕ್ತಿಕ ಪುರಾವೆಗಳನ್ನು ಆರ್.ಟಿ.ಐ ಆನ್‌ ಲೈನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬಾರದು.

ಸಹಾಯ ಕೇಂದ್ರ

ಈ ಪೋರ್ಟಲ್‍ಗೆ ಸಂಬಂದಿಸಿದ ಯಾವುದೇ ಪ್ರಶ್ನೆಗಳಿಗೆ, ಕಛೇರಿ ವೇಳೆ ಬೆಳಿಗ್ಗೆ 10-00 ರಿಂದ ಸಾಯಂಕಾಲ 05-30 ರೊಳಗೆ ಸಹಾಯವಾಣಿ ಸಂಖ್ಯೆ: 080-22585858 ಅನ್ನು ಸಂಪರ್ಕಿಸಬಹುದಾಗಿದೆ ಹಾಗೂ rtionline@karnataka.gov.in ಗೆ ಇ-ಮೇಲ್ ಕಳುಹಿಸಬಹುದಾಗಿದೆ.

ದಯವಿಟ್ಟು ನಿಮ್ಮ ಸಲಹೆ/ಪ್ರತಿಕ್ರಿಯೆಯನ್ನು rtionline@karnataka.gov.in ನಲ್ಲಿ ಹಂಚಿಕೊಳ್ಳಿ.

ಮುಖಪುಟ| ಕರ್ನಾಟಕ ಸರ್ಕಾರ| ಎಫ್.ಎ.ಕ್ಯೂ